Scholarship:
10ನೇ ತರಗತಿ ಪಾಸಾದವರಿಗೆ
10 ಸಾವಿರ ಸ್ಕಾಲರ್ ಶಿಪ್!
ಈ ವಿದ್ಯಾರ್ಥಿ ವೇತನವು 10ನೇ ತರಗತಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 10 ಸಾವಿರ ರೂ ನೀಡುತ್ತದೆ. ನೀವೂ ಅಪ್ಲೈ ಮಾಡಿ.
ಈ ವಿದ್ಯಾರ್ಥಿ ವೇತನವು 10ನೇ ತರಗತಿ (SSLC) ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ (Yearly) 10 ಸಾವಿರ (10 Thousand) ರೂ ನೀಡುತ್ತದೆ. ಕರ್ನಾಟಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಲ್ಲಿ ಪ್ರಸ್ತುತ 11 ಅಥವಾ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು (Students) ಈ ವಿದ್ಯಾರ್ಥಿವೇತನಕ್ಕೆ (SCholarship) ಅಪ್ಲೈ ಮಾಡಬಹುದು. ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ನ (Infosys) ಸಹ-ಸಂಸ್ಥಾಪಕ ಮತ್ತು ಮಾಜಿ CEO ಎಸ್‌ಡಿ ಶಿಬುಲಾಲ್ ಅವರು 1999 ರಲ್ಲಿ ಈ ವಿದ್ಯಾರ್ಥಿ ವೇತನ ಸ್ಥಾಪಿಸಿದರು.
ವಿದ್ಯಾರ್ಥಿ ವೇತನ ವಿವರ
- ವಿದ್ಯಾರ್ಹತೆ 10ನೇ ತರಗತಿ ಪಾಸಾಗಿಬೇಕು
- ಮೊತ್ತ 10 ಸಾವಿರ
- ಕೊನೆ ದಿನಾಂಕ 31 ಡಿಸೆಂಬರ್
ಈ ಮೇಲಿನ ಮಾಹಿತಿ ಅನುಸಾರ ನೀವೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದರೆ ಅರ್ಜಿ ಸಲ್ಲಿಸಬಹುದು. ಸರೋಜಿನಿ ದಾಮೋದರನ್ ಪ್ರತಿಷ್ಠಾನವು ಸಮಾಜದಲ್ಲಿ ಹಿಂದುಳಿದವರ ಉನ್ನತ ಶಿಕ್ಷಣಕ್ಕೆ ಕೊಡುಗೆ ನೀಡುತ್ತಿದೆ. ಇದು ವಿದ್ಯಾರ್ಥಿಗಳ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವರ್ಷಕ್ಕೆ INR 10 ರೂ ಪಡೆಯುತ್ತಾರೆ.
ವಿದ್ಯಾರ್ಥಿ ವೇತನದ ಅರ್ಹತಾ ವಿವರ
1. ಕರ್ನಾಟಕದಿಂದ ಮಾನ್ಯತೆ ಪಡೆದ ಶಾಲೆಗಳಿಂದ 10 ನೇ ತರಗತಿ ಅಥವಾ ತತ್ಸಮಾನ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
2. 10ನೇ/SSLC ಪರೀಕ್ಷೆಯಲ್ಲಿ ಕನಿಷ್ಠ 90% ಅಂಕಗಳನ್ನು ಪಡೆದಿರಬೇಕು
3. ಎಲ್ಲಾ ಆದಾಯದ ಮೂಲಗಳಿಂದ INR 2 ಲಕ್ಷಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ಆದಾಯವನ್ನು ಹೊಂದಿರಬೇಕು.
ಪ್ರಯೋಜನಗಳು
ಆಯ್ಕೆಯಾದ ಅಭ್ಯರ್ಥಿಗಳು ವರ್ಷಕ್ಕೆ INR 10 ಸಾವಿರ ರೂ ಪಡೆಯುತ್ತಾರೆ. ಇದು ಇವರ ಕಲಿಕೆಗೆ ಸಹಾಯವಾಗುತ್ತದೆ. ಕಲಿಕೆಗೆ ಪೂರಕವಾದ ಪಠ್ಯ ಪುಸ್ತಕಗಳನ್ನು ಕೊಳ್ಳಲು ಇದು ಪ್ರಯೋಜನವಾಗುತ್ತದೆ.
ಅವಶ್ಯಕ ದಾಖಲೆಗಳು
1. ಇತ್ತೀಚಿನ ಛಾಯಾಚಿತ್ರ ನೀಡಬೇಕು
2. 10 ನೇ ತರಗತಿ ಅಂಕ ಪಟ್ಟಿಯ ಸ್ಕ್ಯಾನ್ ಮಾಡಿದ ಪ್ರತಿ ಇರಬೇಕು.
3. ಆದಾಯ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ
ಗಮನಿಸಿ - ಮಾರ್ಕ್ ಶೀಟ್ ಲಭ್ಯವಿಲ್ಲದಿದ್ದರೆ ನೀವು SSLC/CBSE/ICSC ವೆಬ್‌ಸೈಟ್‌ನಿಂದ ತಾತ್ಕಾಲಿಕ ಅಥವಾ ಆನ್‌ಲೈನ್ ಮಾರ್ಕ್ ಶೀಟ್ ಅನ್ನು ಅಪ್‌ಲೋಡ್ ಮಾಡಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
1. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಮೂಲಕ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
2. ನೀವು ಕಡ್ಡಾಯ ದಾಖಲೆಗಳು ಮತ್ತು ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿದ ನಂತರವೇ ಅಪ್ಲಿಕೇಶನ್ ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ 31 ಡಿಸೆಂಬರ್ 2022
ಆಯ್ಕೆ ಮಾನದಂಡ
ಸರೋಜಿನಿ ದಾಮೋದರನ್ ಫೌಂಡೇಶನ್ (SDF) ಅರ್ಜಿದಾರರನ್ನು ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಅರ್ಜಿ ನಮೂನೆಯಲ್ಲಿ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಚಿಕ್ಕ ಆನ್‌ಲೈನ್ ಪರೀಕ್ಷೆ ಅಥವಾ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
✅ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ:👇🏻
ವಿಳಾಸ:ಸರೋಜಿನಿ ದಾಮೋದರನ್ ಫೌಂಡೇಶನ್678, 11ನೇ ಮುಖ್ಯ ರಸ್ತೆ, 4ನೇ ಟಿ ಬ್ಲಾಕ್ ಪೂರ್ವ,4 ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560041
ಈ ಕೂಡಲೇ ಅಪ್ಲೈ ಮಾಡಿ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ.