The subject of the Constitution Different competing on Heard in the exam Questionnaires

- April 14, 2022

ಸಂವಿಧಾನ ವಿಷಯದ 

ಮೇಲೆ ವಿವಿಧ ಸ್ಪರ್ಧಾತ್ಮಕ 

ಪರೀಕ್ಷೆಯಲ್ಲಿ ಕೇಳಿರುವ 

ಪ್ರಶ್ನೋತ್ತರಗಳು.


  Important for all competitive exam.  


ಸಂವಿಧಾನ ತಿದ್ದುಪಡಿ ವಿಧಾನವನ್ನು ದಕ್ಷಿಣ ಆಫ್ರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ. 

ಭಾರತ ಸಂವಿಧಾನದ 20ನೇ ಭಾಗದಲ್ಲಿರುವ 368ನೇ ವಿಧಿಯು ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದೆ. 

ಸಂವಿಧಾನದ 105ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
ಹಿಂದುಳಿದ ಜಾತಿಗಳನ್ನು ಒಬಿಸಿ ಪಟ್ಟಿ ರಚಿಸುವ ಹಕ್ಕನ್ನು ಮರಳಿ ರಾಜ್ಯಗಳಿಗೆ ನೀಡುವ ಮಸೂದೆ. 

ಸಂವಿಧಾನದ 104ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
330 ಮತ್ತು 332ನೇ ವಿಧಿಗಳ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನೀಡಲಾಗಿದ್ಧ ಸ್ಥಾನ ಮೀಸಲಾತಿಯನ್ನು 2020 ರಿಂದ 2030ಕ್ಕೆ ವಿಸ್ತರಿಸಲಾಗಿದೆ. 

ಸಂವಿಧಾನದ 103ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸಾರ್ವಜನಿಕ (ಸರ್ಕಾರಿ) ಉದ್ಯೋಗಗಲ್ಲಿ ಶೇ.10 ರಷ್ಟು ಮಿಸಲಾತಿ ಸ್ಥಾನ ನೀಡುವುದು. 

ಸಂವಿಧಾನದ 102ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವುದು. 

 ಸಂವಿಧಾನದ 101ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
ಸರಕು ಮತ್ತು ಸೇವೆಗಳ ತೆರಿಗೆ (GST) ಮಸೂದೆ. 

 ಸಂವಿಧಾನದ 99ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಕೊಲಿಜಿಯಂ ಪದ್ಧತಿಯನ್ನು ರದ್ದುಪಡಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ರಚನೆಗೆ ಅವಕಾಶ ಕಲ್ಪಿಸಿತು. 

ಸಂವಿಧಾನದ 98ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಸಂವಿಧಾನಕ್ಕೆ 371(J) ಅಡಿಯಲ್ಲಿ ಹೈದರಾಬಾದ್ - ಕರ್ನಾಟಕದ ಏಳು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುತ್ತದೆ. 

ಸಂವಿಧಾನದ 93ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಖಾಸಗಿ ಅನುದಾನಿತ ರಹಿತ ವಿದ್ಯಾ ಸಂಸ್ಥೆಗಳಲ್ಲಿ (ಅಲ್ಪಸಂಖ್ಯಾತರ ಸಂಸ್ಥೆಗಳನ್ನು ಹೊರತುಪಡಿಸಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಮೀಸಲು ನಿಯಮವನ್ನು ಜಾರಿಗೊಳಿಸಲು ಅವಕಾಶ ಮಾಡಿದೆ. 

 ಸಂವಿಧಾನದ 92ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಬೋಡೋ, ದೋಗ್ರಿ, ಮೈಥಿಲಿ ಮತ್ತು ಸಂತಾಲಿ ಎಂಬ ನಾಲ್ಕು ಭಾಷೆಗಳನ್ನು ಸಂವಿಧಾನದ 08ನೇ ಅನುಸೂಚಿಗೆ ಸೇರಿಸಲಾಯಿತು. 

ಸಂವಿಧಾನದ 91ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಕೇಂದ್ರ ಮಂತ್ರಿ ಮಂಡಲದ ಸದಸ್ಯರ ಸಂಖ್ಯೆ ಲೋಕಸಭೆಯ ಒಟ್ಟು ಸದಸ್ಯರ ಪೈಕಿ ಶೇ.15 ನ್ನು ಮೀರುವಂತಿಲ್ಲ. 

 ಸಂವಿಧಾನದ 89ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
338ನೇ ವಿಧಿಗೆ ತಿದ್ದುಪಡಿ ತರುವುದರ ಮೂಲಕ ಪರಿಶಿಷ್ಟ ಜಾತಿಯವರಿಗೆ ಪ್ರತ್ಯೇಕ ರಾಷ್ಟ್ರೀಯ ಆಯೋಗ ರಚಿಸಲಾಯಿತು. 

 ಸಂವಿಧಾನದ 86ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
51ಎ ವಿಧಿಯನ್ನು ಅಳವಡಿಸಿ 6-14 ವರ್ಷಗಳವರೆಗಿನ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು. 

ಸಂವಿಧಾನದ 73&74ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
ಈ ಕಾಯ್ದೆಯನ್ನು ಪಂಚಾಯತ್ ರಾಜ್ ಹಾಗೂ ಮುನ್ಸಿಪಲ್ ಕಾಯ್ದೆ ಎಂದು ಕರೆಯುತ್ತಾರೆ. 

 ಸಂವಿಧಾನದ 71ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
ಕೊಂಕಣಿ, ಮಣಿಪುರಿ, ಮತ್ತು ನೇಪಾಳಿ ಭಾಷೆಗಳನ್ನು ಸಂವಿಧಾನದ 08ನೇ ಅನುಸೂಚಿಗೆ ಸೇರಿಸಲಾಯಿತು. 

ಸಂವಿಧಾನದ 61ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
ಈ ಕಾಯ್ದೆ ಮತದಾನದ ವಯಸ್ಸನ್ನು 21 ವರ್ಷಗಳಿಂದ 18 ವರ್ಷಗಳಿಗೆ ಇಳಿಸಲಾಯಿತು. 

ಸಂವಿಧಾನದ 52ನೇ ಸಂವಿಧಾನ ತಿದ್ದುಪಡಿ ಕಾಯಿದೆ - 
ಇದು 10ನೇ ಅನುಸೂಚಿಯಲ್ಲಿ  ಪಕ್ಷಾಂತರ ನಿಷೇಧ (1985) ಕಾಯ್ದೆಯನ್ನು ಒಳಗೊಂಡಿದೆ. 

 ಸಂವಿಧಾನದ 21ನೇ ಸಂವಿಧಾನ ತಿದ್ದುಪಡಿ ಕಾಯಿದೆ- 
ಸಿಂಧಿ ಭಾಷೆಯನ್ನು 15ನೇ ಭಾಷೆಯನ್ನಾಗಿ 08ನೇ ಅನುಸೂಚಿಗೆ ಸೇರ್ಪಡೆ ಮಾಡಲಾಯಿತು. 

ಸಂವಿಧಾನದ 44ನೇ ಸಂವಿಧಾನ ತಿದ್ದುಪಡಿ ಕಾಯಿದೆ 

 ಆಂತರಿಕ ಎಂಬ ಪದವನ್ನು ತೆಗೆದು ಹಾಕಿ ಸಶಸ್ತ್ರ ಬಂಡಾಯ ಎಂಬ ಪದವನ್ನು ಸೇರಿಸಲಾಯಿತು. 

 ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು‌ ಹಾಕಿ 300A ವಿಧಿಯಲ್ಲಿ ಸೇರಿಸಲಾಯಿತು. 

20&21ನೇ ವಿಧಿಗಳಲ್ಲಿ ಕಂಡುಬರುವ ಮೂಲಭೂತ ಹಕ್ಕುಗಳನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ರದ್ದುಗೊಳಿಸದಂತೆ ಮಾಡಲಾಯಿತು. 

ಸಂವಿಧಾನದ 42ನೇ ಸಂವಿಧಾನ ತಿದ್ದುಪಡಿ ಕಾಯಿದೆ 

 ಸಮಾಜವಾದಿ, ಜಾತ್ಯಾತೀತ ಮತ್ತು ಸಮಗ್ರತೆ ಎಂಬ ಮೂರು ಹೊಸ ಪದಗಳನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಯಿತು. 

 ಸಂವಿಧಾನಕ್ಕೆ 14-ಎ ಭಾಗವನ್ನು ಸೇರಿಸುವುದರ ಮೂಲಕ ಆಡಳಿತಾತ್ಮಕ ಹಾಗೂ ಇತರೆ ಟ್ರಿಬ್ಯುನಗಳ ರಚನೆಗೆ ಅವಕಾಶ ನೀಡಲಾಯಿತು. 

 ಐದು ವಿಷಯಗಳನ್ನು ರಾಜ್ಯಪಟ್ಟಿಯಿಂದ ಸಮವರ್ತಿ ಪಟ್ಟಿಗೆ ವರ್ಗಾಯಿಸಲಾಯಿತು. [ಶಿಕ್ಷಣ, ಅರಣ್ಯ, ಅಳತೆ ಮತ್ತು ತೂಕ, ವನ್ಯಜೀವಿ ಮತ್ತು ಪಕ್ಷಿಗಳ ಸಂರಕ್ಷಣೆ, ಉಳಿದ ನ್ಯಯಾಲಯಗಳ (ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯ ಹೊರತುಪಡಿಸಿ) ರಚನೆ ಮತ್ತು ಅಧಿಕಾರ]. 

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳ ನ್ಯಾಯಿಕ ವಿಮರ್ಶೆ ಮತ್ತು ವಿಶೇಷ ಆಜ್ಞೆಗಳ ವ್ಯಾಪ್ತಿಯನ್ನು ಮೊಟಕುಗೊಳಿಸಲಾಯಿತು. 

ಅಖಿಲ ಭಾರತ ನ್ಯಾಯಾಂಗ ಸೇವೆಗಳ ಸೃಷ್ಟಿಗೆ ಅವಕಾಶ ಮಾಡಲಾಯಿತು. 

ಇದನ್ನು "ಮಿನಿ ಸಂವಿಧಾನ" ಎಂದು ಕರೆಯುತ್ತಾರೆ. ಈ ತಿದ್ದುಪಡಿಯನ್ನು ಇಂದಿರಾಗಾಂಧಿಯವರ ನೇತೃತ್ವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸೇರಿಸಲಾಯಿತು. 

 ಸಂವಿಧಾನದ 04ನೇ ಭಾಗಕ್ಕೆ 03 ಹೊಸ ರಾಜ್ಯ ನಿರ್ದೇಶಕ ತತ್ವಗಳನ್ನು ಸೇರ್ಪಡೆ ಮಾಡಲಾಯಿತು. 

 ಎಲ್ಲರಿಗೂ ಸಮಾನ ನ್ಯಾಯ ಹಾಗೂ ದುರ್ಬಲರಿಗೆ ಉಚಿತ ಕಾನೂನು ನೆರವು (39-ಎ) 

ಉದ್ದಿಮೆಗಳ ವ್ಯವಸ್ಥಾಪನೆಯಲ್ಲಿ ಪಾಲ್ಗೊಳ್ಳಲು ಕಾರ್ಮಿಕರಿಗೆ ಅವಕಾಶ ನೀಡುವುದು (43-ಎ) 

 ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ (48ಎ) 

 ಭಾರತದ ಯಾವುದೇ ಭಾಗದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಅವಕಾಶ ನೀಡಲಾಯಿತು.
 

Start typing and press Enter to search